A review by harshithcs
ಚೋಮನ ದುಡಿ | Chomana Dudi by Kota Shivarama Karanth

emotional reflective sad medium-paced
  • Plot- or character-driven? Character
  • Strong character development? Yes
  • Loveable characters? Yes
  • Diverse cast of characters? Yes
  • Flaws of characters a main focus? No

4.5

 ಕುಲದ ದೇವರನ್ನು ನಂಬಿ, ತನ್ನ ಆಸೆ ಕೈಗೂಡದ ಮೇಲೆ, ಪ್ರಾದಿಯ ದೇವರನ್ನು ನಂಬಿದರೇನು ಹಾನಿ

ಊರ ದಣಿಯರಿಗೆ ಕರುಣೆ ಅನುಕಂಪ ಕೊಟ್ಟ ದೇವರಿಗೆ. ಕಾಡಿನಲ್ಲಿ ಎತ್ತುಗಳನ್ನು ತೋರಿಸಿದ ದೇವರಿಗೆ; ಒಂದು ಗೇಣು ಬೇಸಾಯ ಮಾಡಲು ನೆಲ ಕೊಟ್ಟಿದ್ದರೆ ಅವನ ಶಕ್ತಿ ಕಳೆದುಹೋಗುತ್ತಿತ್ತೆ?

ಬೆಳ್ಳಿಯ ತ್ವಚೆಯನ್ನು ಹಿಂದುಮುಂದು ನೋಡದೆ ಆಲಿಸುವ ದೊರೆ, ದಣಿ, ಸೇರುಗಾರನಿಗೆ; ನೀರಲ್ಲಿ ಮುಳುಗುತ್ತಿರುವ ಮಗುವನ್ನು ಕಾಪಡಿವಾಗ ಮಾತ್ರ ತನ್ನ ಜಾತಿ ಜ್ಞಾಪಕವಾಗುತ್ತದಯೇ?

ಮನುಷ್ಯ ತನಗೆ ಬೇಕಾದ ನಿಯಮಗಳನ್ನು ರೂಪಿಸಿಕೊಂಡು, ದೌರ್ಜನ್ಯವನ್ನು ಪಾವಿತ್ರತೆಗೆ ಹೋಲಿಸಿ, ತನ್ನ ಹೊಟ್ಟೆ ತುಂಬೀಸ್ಕೊಳ್ಳುವ. ಹಾಗೂ ದೌರ್ಜನ್ಯಕ್ಕೆ ಒಳಗಾದ ಚೋಮನ ಕಥೆಯನ್ನು ಕಾರಂತರು ಬಹಳ ಸೂಕ್ಷ್ಮವಾಗಿ ನಮ್ಮ ಮುಂದೆ ಇಟ್ಟಿದಾರೆ