You need to sign in or sign up before continuing.
Take a photo of a barcode or cover
A review by harshithcs
ತೂಫಾನ್ ಮೇಲ್ [Toofan Mail] by Jayant Kaykini
5.0
ಜಯಂತ ಕಾಯ್ಕಿಣಿಯವರ ಮನುಷ್ಯ, ಊರು, ಜೀವನವನ್ನ ಕಾಣುವ humanist ನೋಟ ಈ ಸಂಕಲನದಲ್ಲಿ ಎದ್ದು ಕಾಣುತ್ತದೆ. ಮುಂಬೈ ಹಾಗೂ ನಗರದ ನಿವಾಸಿಗಳನ್ನು ವರ್ಣಿಸಲು ಅವರು ಉಪಯೋಗಿಸುವ ರೂಪಕಗಳಿಗಂತೋ ಸಾಟಿಯೇ ಇಲ್ಲ.
"ಸ್ಟೇಷನ್ನಿಂದ ಭೋರ್ಗೆರೆದು ಹೊರಬೀಳುವ ಜನಪ್ರವಾಹ ಇಳಿಬಿಸಿಲಿಗೆ ಹೊಳೆಯುತ್ತಿತ್ತು." ಇಂತಹ ಹಲವಾರು ಸಾಲುಗಳಿಂದ ನಾನು ಕೆಲ ಕಾಲ ಓದುವುದನ್ನು ಬಿಟ್ಟು ನನ್ನ ಅಕ್ಕಪಕ್ಕದ ಬೆಂಗಳೂರನ್ನು ಕಂಡು ಕಣ್ಣು ತಿಂಬಿಕೊಳ್ಳುತಿದ್ದೆ.
ಆದರೆ ಕಾಯ್ಕಿಣಿ ಅವರ biggest strength ಅವರು ಕಥೆ ಕಟ್ಟುವ ರೀತಿ. ಪ್ರತಿ ಕಥೆಯ ಕೊನೆಯಲ್ಲಿ "ಅಯ್ಯೋ ಮುಗೀತಾ?" ಎಂದೆನಿಸುತ್ತದೆ. ಮತ್ತಷ್ಟು ಕಾಲ ಅವರು ವರ್ಣಿಸಿರುವ, ಚಿತ್ರಿಸಿರುವ ಮುಂಬೈನಲ್ಲಿ ಕಾಲ ಕಳೆಯಬೇಕು, ಈ ಸುಂದರ ಪಾತ್ರಗಳ ಜೊತೆ ಇನ್ನೂ ಹೆಚ್ಚು ಕಾಲ ಬಾಳಬೇಕು ಎಂದು ಆಸೆಯಾಗುತ್ತದೆ. ಅದೇ ಒಳ್ಳೆ ಸಣ್ಣ ಕಥೆಗಳ ವಿಶೇಷತೆ. ಸಂಪೂರ್ಣ closure ಕೊಡದೆ, ಇನ್ನಷ್ಟು ಮತ್ತಷ್ಟು ಬೇಕು ಎಂಬ ಬಯಕೆ ಮೂಡಿಸುವುದು.
ನನಗೆ ಬಹಳ ಇಷ್ಟವಾದ ಕಥೆಗಳು:
- ಭಾಮಿನಿ ಸಪ್ತಪದಿ
- ಬಕುಲ ಗಂಧ
- ಟಿಕ್ ಟಿಕ್ ಗೆಳೆಯ
- ಕನ್ನಡಿ ಇಲ್ಲದ ಊರಲ್ಲಿ
- ನೋ ಪ್ರೆಸೆಂಟ್ಸ್ ಪ್ಲೀಸ್