A review by harshithcs
ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು Sereyalli Kaleda Hadinalku Dinagalu by Senani, Krupakar, Krupakar, ಕೃಪಾಕರ ಸೇನಾನಿ [krupakar senani]

adventurous funny informative lighthearted reflective fast-paced

4.0

ಕೃಪಾಕರ ಮತ್ತು ಸೇನಾನಿಯವರ ಬಹಳ ಲಘು, ಹಾಸ್ಯಾಸ್ಪದದ, sarcastic memoir ಓದಲು ಬಹಳ ಹಿತ. ತಮಗೆ ಆಗಿರುವ ಈ ಅನಿರೀಕ್ಷಿತ ಹಾಗೂ ಕಷ್ಟದ ಘಟನೆಯನ್ನು ಕೃಪಾಕರರು ಬರೆದ ರೀತಿ, ಸೇನಾನಿಯವರು ವೀರಪ್ಪನ್ ಜತೆ ನಡೆದುಕೊಂಡ ರೀತಿ ಅವರ ಸ್ವಭಾವವನ್ನು ತೋರಿಸುತ್ತೆ. 

ವೀರಪ್ಪನ್ ಬಗ್ಗೆ ಚಿಕ್ಕಂದಿನಿಂದಲೂ ಕೇಳುತ್ತಲೇ ಬೇಳೆದಿದ್ದಿನಿ. ಆದ್ರೆ ಇತ್ತೀಚಿಗೆ ಬಂದ "The Hunt for Veerappan" ಎಂಬ show ನೋಡಿ, ಅವನ ಬಗ್ಗೆ ಇನ್ನಷ್ಟು ಕುತೂಹಲ ಮೂಡಿತು. ಕೃಪಾಕರ ಸೇನಾನಿಯವರ ಬರಹಗಳು ಹಾಗೂ ಇತರ ಕೆಲಸಗಳನ್ನು ಓದಿದ್ದೆ, ನೋಡಿದ್ದೆ, ಈ ಪುಸ್ತಕವನ್ನು ಕೂಡ ತುಂಬಾ ಹಿಂದೆ ಖರೀದಿಸಿದ್ದೆ. ಆದರೆ ಈಗ ಓದಿ ಮುಗಿಸಿ ವೀರಪ್ಪನ್ ಬಗ್ಗೆ ಅಷ್ಟೇ ಅಲ್ಲ, ನಮ್ಮ ಸರ್ಕಾರ, ಪೊಲೀಸ್ ವ್ಯವಸ್ಥೆ, ಪತ್ರಿಕೋದ್ಯಮ ಇವೇಲ್ಲರ ಬಗ್ಗೆ ನನಗಿದ್ದ ಅಭಿಪ್ರಾಯಗಳನ್ನು ಮರು ಪರಿಶೀಲನೆ ಮಾಡಬೇಕು ಎಂದೆನಿಸದೆ.

ಕೃಪಾಕರರು ತಮ್ಮ ಪುಸ್ತಕವನ್ನು ಈ ವಾಕ್ಯದಿಂದ ಮುಕ್ತಾಯ ಮಾಡಿದ್ದಾರೆ.
ಅವನನ್ನ ಮುಗಸ್ ಬೇಕು..... ಅದರಲ್ಲೇನು ಅನುಮಾನವೇ ಬೇಡ. ಆದರೆ.... ಅವನ ಪ್ರತಿಭೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕಲ್ಲ

ನಮ್ಮ ಈಗಿನ ವ್ಯವಸ್ಥೆ ಬಗ್ಗೆ ಈ ವಾಕ್ಯದ ಮೂಲಕವಷ್ಟೇ ಅಲ್ಲದೆ, ಇಡೀ ಪುಸ್ತಕದಲ್ಲಿ, ಕೃಪಾಕರರು ತುಂಬಾ ಆಳವಾದ ಜ್ಞಾನವನ್ನೂ ಹಾಗೂ ಟೀಕೆಯನ್ನೂ ಮಾಡಿದ್ದಾರೆ.